Notes
ವಿಭಾಗ 1: ಗ್ರಾಹಕರ ಅರ್ಥ, ಶಿಕ್ಷಣ ಮತ್ತು ಶೋಷಣೆ (ಟಿಪ್ಪಣಿಗಳು)
1. ಪೀಠಿಕೆ ಮತ್ತು ಗ್ರಾಹಕರ ಅರ್ಥ:
- ಈ ಅಧ್ಯಾಯದಲ್ಲಿ ಗ್ರಾಹಕರ ಹಕ್ಕುಗಳು, ಕರ್ತವ್ಯಗಳು, ಗ್ರಾಹಕರ ಶೋಷಣೆ, ಗ್ರಾಹಕರ ರಕ್ಷಣೆಗಾಗಿ ಇರುವ ಕಾನೂನುಗಳು ಹಾಗೂ ದೂರು ಪರಿಹಾರ ವ್ಯವಸ್ಥೆಗಳ ಬಗ್ಗೆ ಅಧ್ಯಯನ ಮಾಡಲಾಗುತ್ತದೆ.
- ಗ್ರಾಹಕ (Consumer): ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ವಸ್ತುಗಳು ಅಥವಾ ಸೇವೆಗಳನ್ನು ಖರೀದಿಸುವ ವ್ಯಕ್ತಿಯನ್ನು ಗ್ರಾಹಕ ಎಂದು ಕರೆಯುತ್ತಾರೆ. (ಉದಾ: ದಿನಸಿ ಖರೀದಿದಾರ, ವಿದ್ಯುತ್ ಬಳಕೆದಾರ, ಬಸ್ ಪ್ರಯಾಣಿಕ).
2. ಗ್ರಾಹಕರ ಶಿಕ್ಷಣ ಮತ್ತು ಶೋಷಣೆ:
- ಗ್ರಾಹಕರ ಶಿಕ್ಷಣ: ಗ್ರಾಹಕರು ಹಕ್ಕುಗಳು, ಕರ್ತವ್ಯಗಳು ಹಾಗೂ ಮಾರುಕಟ್ಟೆಯ ಮೋಸಗಳಿಂದ ರಕ್ಷಿಸಿಕೊಳ್ಳುವ ಬಗ್ಗೆ ಅರಿವು ಪಡೆಯುವುದು. ಇದು ವ್ಯಾಪಾರಿಗಳ ಮೋಸದಿಂದ ರಕ್ಷಣೆಗೆ, ಗುಣಮಟ್ಟದ ವಸ್ತು ಖರೀದಿಸಲು ಮತ್ತು ನ್ಯಾಯ ಪಡೆಯಲು ಅತ್ಯಗತ್ಯ.
- ಗ್ರಾಹಕರ ಶೋಷಣೆ (Consumer Exploitation): ವ್ಯಾಪಾರಿಗಳು ಅಥವಾ ಉತ್ಪಾದಕರು ಗ್ರಾಹಕರನ್ನು ಅನ್ಯಾಯವಾಗಿ ಬಳಸಿಕೊಳ್ಳುವುದು.
- ರೂಪಗಳು: ಕಡಿಮೆ ತೂಕ/ಅಳತೆ, ಕಳಪೆ ಗುಣಮಟ್ಟ, ಅಧಿಕ ಬೆಲೆ ವಸೂಲಿ, ನಕಲಿ ವಸ್ತುಗಳ ಮಾರಾಟ, ತಪ್ಪು ಜಾಹೀರಾತು, ಸೇವೆಗಳ ಕೊರತೆ.
ವಿಭಾಗ 2: ಗ್ರಾಹಕರ ಹಕ್ಕುಗಳು, ಕರ್ತವ್ಯಗಳು ಮತ್ತು ಗುಣಮಟ್ಟದ ಗುರುತುಗಳು (ಟಿಪ್ಪಣಿಗಳು)
3. ಗ್ರಾಹಕರ ಹಕ್ಕುಗಳು ಛತ್ತು ಕರ್ತವ್ಯಗಳು:
- ಹಕ್ಕುಗಳು:
- ಸುರಕ್ಷತೆಯ ಹಕ್ಕು.
- ಮಾಹಿತಿ ಪಡೆಯುವ ಹಕ್ಕು (ಉತ್ಪಾದನಾ ದಿನಾಂಕ, ಬೆಲೆ, ತೂಕ).
- ಆಯ್ಕೆಯ ಹಕ್ಕು.
- ಕೇಳಿಸಿಕೊಳ್ಳುವ ಹಕ್ಕು.
- ಪರಿಹಾರ ಪಡೆಯುವ ಹಕ್ಕು.
- ಗ್ರಾಹಕ ಶಿಕ್ಷಣ ಪಡೆಯುವ ಹಕ್ಕು.
- ಕರ್ತವ್ಯಗಳು: ವಸ್ತುವಿನ ಬಗ್ಗೆ ಮಾಹಿತಿ ಪಡೆಯಬೇಕು (ಲೇಬಲ್, ISI, AGMARK ಪರಿಶೀಲನೆ), ಖರೀದಿಸಿದ ವಸ್ತುವಿಗೆ ಬಿಲ್/ರಸೀದಿ ಪಡೆಯಬೇಕು, ಕಳಪೆ ವಸ್ತುಗಳ ಬಗ್ಗೆ ದೂರು ನೀಡಬೇಕು.
4. ಗುಣಮಟ್ಟದ ಗುರುತುಗಳು:
- ISI (Indian Standards Institution): ವಿದ್ಯುತ್ ಉಪಕರಣಗಳು ಮತ್ತು ಕೈಗಾರಿಕಾ ಉತ್ಪನ್ನಗಳ ಗುಣಮಟ್ಟದ ಗುರುತು.
- AGMARK: ಕೃಷಿ ಉತ್ಪನ್ನಗಳು ಮತ್ತು ಆಹಾರ ಪದಾರ್ಥಗಳ ಉತ್ತಮ ಗುಣಮಟ್ಟದ ಗುರುತು.
- FPO (Fruit Products Order): ಹಣ್ಣುಗಳಿಂದ ತಯಾರಿಸಲಾದ ಉತ್ಪನ್ನಗಳಿಗೆ ಬಳಸುವ ಗುರುತು.
- Hallmark: ಚಿನ್ನಾಭರಣಗಳ ಶುದ್ಧತೆಯನ್ನು ಸೂಚಿಸುತ್ತದೆ.
ವಿಭಾಗ 3: ಗ್ರಾಹಕರ ರಕ್ಷಣಾ ಕಾಯ್ದೆ ಮತ್ತು ದೂರು ಪರಿಹಾರ ವ್ಯವಸ್ಥೆ (ಟಿಪ್ಪಣಿಗಳು)
5. ಗ್ರಾಹಕರ ರಕ್ಷಣಾ ಕಾಯ್ದೆಗಳು:
- 1986 ಕಾಯ್ದೆ: ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಜಾರಿಗೊಳಿಸಿದ ಮಹತ್ವದ ಕಾಯ್ದೆ.
- 2019 ಕಾಯ್ದೆ: ಹೊಸ ಆರ್ಥಿಕ ವ್ಯವಸ್ಥೆ ಮತ್ತು ಇ-ವಾಣಿಜ್ಯವನ್ನು ಗಮನದಲ್ಲಿಟ್ಟುಕೊಂಡು ರಕ್ಷಣೆಯನ್ನು ಬಲಪಡಿಸಲಾಗಿದೆ.
- CCPA (ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ): ಗ್ರಾಹಕರ ಹಕ್ಕು ರಕ್ಷಣೆ, ತಪ್ಪು ಜಾಹೀರಾತು ನಿಯಂತ್ರಣ ಮತ್ತು ಮಾರುಕಟ್ಟೆ ಮೋಸ ತಡೆಯುವ ಪ್ರಾಧಿಕಾರ.
6. ಗ್ರಾಹಕರ ದೂರು ಪರಿಹಾರ ವ್ಯವಸ್ಥೆ ಮತ್ತು ಇ-ವಾಣಿಜ್ಯ:
- ಮೂರು ಹಂತದ ಆಯೋಗಗಳು:
- ಜಿಲ್ಲಾ ಗ್ರಾಹಕ ಆಯೋಗ (ಜಿಲ್ಲಾಮಟ್ಟದ ದೂರುಗಳು).
- ರಾಜ್ಯ ಗ್ರಾಹಕ ಆಯೋಗ (ಮೇಲ್ಮನವಿ ವಿಚಾರಣೆ).
- ರಾಷ್ಟ್ರೀಯ ಗ್ರಾಹಕ ಆಯೋಗ (ದೇಶದ ಅತ್ಯುನ್ನತ ಸಂಸ್ಥೆ).
- ದೂರು ಸಲ್ಲಿಸುವ ವಿಧಾನ: ಸಮಸ್ಯೆಯ ದಾಖಲೆ, ಬಿಲ್/ರಸೀದಿ ಲಗತ್ತಿಸುವುದು, ಲಿಖಿತ ದೂರು ಸಲ್ಲಿಕೆ.
- ಇ-ವಾಣಿಜ್ಯ ರಕ್ಷಣೆ: ಆನ್ಲೈನ್ ಖರೀದಿಯಲ್ಲಿ ಅಧಿಕೃತ ವೆಬ್ಸೈಟ್ ಬಳಕೆ, ಪಾವತಿಗಳ ಸುರಕ್ಷತೆ, ರಿಟರ್ನ್ ಪಾಲಿಸಿ ಪರಿಶೀಲನೆ ಮುಖ್ಯ.
ಪರೀಕ್ಷೆಗೆ ಪ್ರಮುಖ ಪ್ರಶ್ನೆಗಳು
2 ಅಂಕಗಳ ಪ್ರಶ್ನೆಗಳು:
- ಗ್ರಾಹಕ ಎಂದರೇನು?
- ಗ್ರಾಹಕರ ಶಿಕ್ಷಣ ಎಂದರೇನು?
- ISI ಗುರುತಿನ ಮಹತ್ವವೇನು?
- AGMARK ಎಂದರೇನು?
- CCPA ಯ ವಿಸ್ತೃತ ರೂಪ ಬರೆಯಿರಿ.
4 ಅಂಕಗಳ ಪ್ರಶ್ನೆಗಳು:
- ಗ್ರಾಹಕರ ಹಕ್ಕುಗಳನ್ನು ವಿವರಿಸಿ.
- ಗ್ರಾಹಕರ ಕರ್ತವ್ಯಗಳನ್ನು ವಿವರಿಸಿ.
- ಗ್ರಾಹಕರ ಶೋಷಣೆಯ ವಿಧಾನಗಳನ್ನು ವಿವರಿಸಿ.
- ಗುಣಮಟ್ಟದ ವಿವಿಧ ಗುರುತುಗಳನ್ನು ವಿವರಿಸಿ.
6 ಅಂಕಗಳ ಪ್ರಶ್ನೆಗಳು:
- ಗ್ರಾಹಕರ ಶಿಕ್ಷಣದ ಅಗತ್ಯತೆ ಮತ್ತು ಮಹತ್ವವನ್ನು ವಿವರಿಸಿ.
- ಗ್ರಾಹಕರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ವಿವರವಾದ ಟಿಪ್ಪಣಿ ಬರೆಯಿರಿ.
- ಗ್ರಾಹಕರ ದೂರು ಪರಿಹಾರ ವ್ಯವಸ್ಥೆಯನ್ನು ವಿವರಿಸಿ.
- ಗ್ರಾಹಕರ ರಕ್ಷಣಾ ಕಾಯ್ದೆ-2019 ರ ಪ್ರಮುಖ ಅಂಶಗಳನ್ನು ವಿವರಿಸಿ.
ಒಂದು ಅಂಕದ ಪ್ರಮುಖ ಅಂಶಗಳು (ನೆನಪಿನ ಸಾರಾಂಶ):
- ಗ್ರಾಹಕರ ರಕ್ಷಣಾ ಕಾಯ್ದೆ - 1986 // ಹೊಸ ಗ್ರಾಹಕರ ರಕ್ಷಣಾ ಕಾಯ್ದೆ - 2019
- CCPA - Central Consumer Protection Authority
- ಕೃಷಿ ಉತ್ಪನ್ನಗಳ ಗುಣಮಟ್ಟದ ಗುರುತು - AGMARK
- ಕೈಗಾರಿಕಾ ಉತ್ಪನ್ನಗಳ ಗುಣಮಟ್ಟದ ಗುರುತು - ISI
- ಚಿನ್ನದ ಗುಣಮಟ್ಟದ ಗುರುತು - Hallmark // ಹಣ್ಣಿನ ಉತ್ಪನ್ನಗಳ ಗುರುತು - FPO
- ಅಧ್ಯಾಯದ ಸೂತ್ರ: “ಜಾಗೃತ ಗ್ರಾಹಕನೇ ಸುರಕ್ಷಿತ ಗ್ರಾಹಕ.”
- ಸಾರಾಂಶ: ಗ್ರಾಹಕರಿಗೆ ಸುರಕ್ಷತೆ, ಮಾಹಿತಿ, ಆಯ್ಕೆ ಮತ್ತು ಪರಿಹಾರದ ಹಕ್ಕುಗಳಿವೆ. ISI, AGMARK, FPO, Hallmark ಪ್ರಮುಖ ಗುಣಮಟ್ಟ ಗುರುತುಗಳು. ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಗ್ರಾಹಕ ಆಯೋಗಗಳು ದೂರುಗಳನ್ನು ಪರಿಹರಿಸುತ್ತವೆ.