ಪಿಫಿನ್ನರ್ ಅವರ ಪ್ರಕಾರ ಸಾರ್ವಜನಿಕ ಆಡಳಿತ ಎಂದರೇನು?
"ಸಾರ್ವಜನಿಕ ನೀತಿಯನ್ನು ಜಾರಿಗೊಳಿಸುವ ಸಾಮೂಹಿಕ ಯತ್ನದ ಸಂಯೋಜನೆಯೇ ಸಾರ್ವಜನಿಕ ಆಡಳಿತ".
ಆಧುನಿಕ ರಾಜ್ಯಗಳನ್ನು 'ಆಡಳಿತಾತ್ಮಕ ರಾಜ್ಯಗಳು' ಎಂದು ಏಕೆ ಕರೆಯಲಾಗುತ್ತದೆ?
ಸಾರ್ವಜನಿಕ ಆಡಳಿತವು ವ್ಯಕ್ತಿಯ ಹುಟ್ಟಿನಿಂದ ಸಾಯುವವರೆಗೆ ಅಗತ್ಯವಾದ ಸೇವೆಗಳನ್ನು ಒದಗಿಸುವುದರಿಂದ ಆಧುನಿಕ ರಾಜ್ಯಗಳನ್ನು 'ಆಡಳಿತಾತ್ಮಕ ರಾಜ್ಯಗಳು' ಎನ್ನಲಾಗುತ್ತದೆ.
ನೇಮಕಾತಿ (Recruitment) ಎಂದರೆ ಏನು?
'ಸೂಕ್ತ ಹುದ್ದೆಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯೇ ನೇಮಕಾತಿ'.
ರಾಷ್ಟ್ರಮಟ್ಟದಲ್ಲಿ ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸುವ ಸಂಸ್ಥೆ ಯಾವುದು?
ಕೇಂದ್ರ ಲೋಕಸೇವಾ ಆಯೋಗ (UPSC).
ಗಡಿ ಭದ್ರತಾ ಪಡೆಯ (BSF) ಮುಖ್ಯ ಜವಾಬ್ದಾರಿ ಏನು?
ಭಾರತದ ಗಡಿ ಪ್ರದೇಶಗಳ ರಕ್ಷಣೆ ಮತ್ತು ಗಡಿಯಾಚೆಗಿನ ಅಪರಾಧ ಕೃತ್ಯಗಳನ್ನು ತಡೆಗಟ್ಟುವುದು.